ಹುದ್ದೆಯ ವಿವರ :
ತಜ್ಞ ವೈದ್ಯರು, ವೈದ್ಯರು, ಶುಶ್ರೂಷಕ/ಕಿ ಅಧಿಕಾರಿಗಳು, ಆಪ್ತ ಸಮಾಲೋಚಕರು, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು.
ಬೆಳಗಾವಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ತಾಲೂಕಾ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನರ್ಸಿಂಗ್ ಅಧಿಕಾರಿ, ವೈದ್ಯ ಸಲಹೆಗಾರ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಒಂದು ವರ್ಷದ ಅವಧಿಗೆ ಗುತ್ತಿಗೆಯ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. 12ನೇ ತರಗತಿ, ಡಿಪ್ಲೊಮಾ, ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಹುದ್ದೆಗೆ ಆಫ್ ಲೈನ್ ಮೂಲಕ ಅಗಸ್ಟ 3ರೊಳಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಯು ಗರಿಷ್ಠ 35 ವರ್ಷದೊಳಿರಬೇಕು. ಕ್ಯಾಟಗರಿ-1, 2ಎ, 2ಬಿ, 3ಎ, 3ಬಿ, ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ೆಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಸಡಲಿಕೆ ಅನ್ವಯವಾಗಲಿದೆ.
ವಿದ್ಯಾರ್ಹತೆ :
ತಜ್ಞ ವೈದ್ಯ ಹುದ್ದೆಗೆ ಎಂಬಿಬಿಎಸ್, ಎಂಡಿ, ವೈದ್ಯ ಹುದ್ದೆಗೆ ಎಂಬಿಬಿಎಸ್ , ಶುಶ್ರೂಷಕ/ಕಿ ಅಧಿಕಾರಿ ಹುದ್ದೆಗೆ ಡಿಪ್ಲೊಮಾ, ಬಿಎಸ್ಸಿ, ಆಪ್ತ ಸಮಾಲೋಚಕರು ಹುದ್ದೆಗೆ ಬಿಎಸ್ ಡಬ್ಲ್ಯು, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗೆ 12ನೇ ತರಗತಿ, ಡಿಎಂಎಲ್ ಟಿ ಅಥವಾ ಹುದ್ದೆಗೆ ಅನುಗುಣವಾಗಿ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ಹುದ್ದೆಗಳ ವಿವರ :
ತಜ್ಞ ವೈದ್ಯರು | 2 |
ವೈದ್ಯರು | 3 |
ಶುಶ್ರೂಷಕ/ಕಿ ಅಧಿಕಾರಿಗಳು | 13 |
ಆಪ್ತ ಸಮಾಲೋಚಕರು | 2 |
ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು | 1 |
ಒಟ್ಟು ಹುದ್ದೆ | 21 |
ವೇತನ:
ತಜ್ಞ ವೈದ್ಯರು | 1,10,000 ರೂ |
ವೈದ್ಯರು | 46,200 ರೂ |
ಶುಶ್ರೂಷಕ/ಕಿ ಅಧಿಕಾರಿಗಳು | 13,255 ರೂ |
ಆಪ್ತ ಸಮಾಲೋಚಕರು | 15,939 ರೂ |
ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು | 16,100 ರೂ |
ಅರ್ಜಿ ಸಲ್ಲಿಕೆ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಅಗಸ್ಟ 3 ರೊಳಗೆ ಜಿಲ್ಲಾ ಎನ್ ಸಿಡಿ ಘಟಕ ಲಸಿಕೆ ಸಂಸ್ಥೆ ಆವರಣ, ತಿಲಕವಾಡಿ, ಬೆಳಗಾವಿ ಈ ವಿಳಾಸಕ್ಕೆ ಕಳುಹಿಸಬೇಕು.
ಪ್ರಮುಖ ಮಾಹಿತಿ :
ಜಿಲ್ಲಾ ಎನ್ ಸಿಡಿ ಘಟಕ ಲಸಿಕೆ ಸಂಸ್ಥೆಯ ಆವರಣದಲ್ಲಿ ಅರ್ಜಿ ನಮೂನೆಯನ್ನು ಪಡೆಯುವ ದಿನಾಂಕ : 22 ರಿಂದ 31 ಜುಲೈ 2024.
ದಾಖಲೆಗಳ ಪರಿಶೀಲನೆಯ ದಿನಾಂಕ :
07 ರಿಂದ 09 ಅಗಸ್ಟ್ 2024.
ಆಯ್ಕೆ ಪ್ರಕ್ರಿಯೆ :
ಮೆರಿಟ್ ಕಮ್ ರೋಸ್ಟರ್ ಪರಿಗಣಿಸಿ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.